ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬಿಬಿಎಂಪಿ ಚುನಾವಣ ಪ್ರಚಾರಕ್ಕೆ ತಾರ ಮೆರಗು

ಬಿಬಿಎಂಪಿ ಚುನಾವಣ ಪ್ರಚಾರಕ್ಕೆ ತಾರ ಮೆರಗು

Thu, 18 Mar 2010 14:57:00  Office Staff   S.O. News Service
ಬೆಂಗಳೂರು,18 : ರಂಗೇರುತ್ತಿರುವ ಬಿಬಿಎಂಪಿ ಚುನಾವಣೆಗೆ ಬಿಜೆಪಿ ಮತ್ತಷ್ಟು ಕಾವೇರಿಸಲು ನಿರ್ಧರಿಸಿದ್ದು ಡ್ರೀಮ್ ಗರ್ಲ್ ಹೇಮಾಮಾಲಿನಿ ಅವರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ಇವರ ಜೊತೆ ಮಾಜಿ ಕ್ರಿಕೆಟಿಗ ಮತ್ತು ಸಂಸದ ನವಜೋತ್ ಸಿಂಗ್ ಸಿದ್ದು ಮತ್ತು ಕಿರುತೆರೆ ನಟಿ ಸ್ಮೃತಿ ಇರಾನಿ ಅವರನ್ನೂ ಕೊನೆಯ ಮೂರು ದಿನ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಲು ಕೇಳಿಕೊಳ್ಳಲು ಬಿಜೆಪಿ ರಾಜ್ಯ ಘಟಕ ನಿರ್ಧರಿಸಿದೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.

ಈ ಮಧ್ಯೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ನಾಳೆ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.

ಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಕೂಡ ಬಿಜೆಪಿಗೆ ಸೇರುವ ಬಗ್ಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಈ ಬಾರಿ ಹಿರಿ ತೆರೆ, ಕಿರುತೆರೆ ಹಾಗೂ ಕ್ರಿಕೆಟ್ ಲೋಕದ ಖ್ಯಾತನಾಮರೆಲ್ಲಾ ಒಗ್ಗೂಡಿ ಬಿಜೆಪಿ ಪರ ಪ್ರಚಾರಕ್ಕೆ ನಿಲ್ಲುವ ಸಾಧ್ಯತೆಗಳು ನಿಚ್ಚಳವಾಗಿವೆ.

ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆಯಲು ಮಾ.19 ಕೊನೆ ದಿನಾಂಕವಾಗಿದೆ. ಮಾ. 28ರಂದು ಮತದಾನ ನಡೆಯಲಿದ್ದು, ಏ. 5ರಂದು ಅಭ್ಯರ್ಥಿಗಳ ಭವಿಷ್ಯದ ಫಲಿತಾಂಶ ಹೊರಬೀಳಲಿದೆ. ಬಹುತೇಕ ಕಡೆ ತ್ರಿಕೋನ ಸ್ಪರ್ಧೆಯಿದ್ದರೂ, ಪ್ರತಿಷ್ಠೆಗಾಗಿ ಎಲ್ಲ ಪಕ್ಷಗಳು ವಿಭಿನ್ನ ಪ್ರಚಾರಕ್ಕೆ ಮುಂದಾಗಿವೆ.

Share: